ಭಾನುವಾರ, ಏಪ್ರಿಲ್ 3, 2011

ಕುಹಕ ನೋಟದೆದುರು ಸೋತವರು....ಗೆಲುವಿಗೆ ಕಾರಣರಾದರೆ!?

ಅಂತು ಭಾರತ ವಿಶ್ವಕಪ್ ಗೆದ್ದಿದೆ. ಇದಕ್ಕೆ ತಂಡದ ಶ್ರಮ ಹಾಗು ಇತರ ತಂಡಗಳ ವೈಫಲ್ಯ ಕಾರಣ ಸಹಜವೇ! ಆದರೆ ನನಗೆ ವಿಶೇಷ ಎನಿಸಿದ್ದು ಮತ್ತೆ ಯಾವುದಲ್ಲ. ಭಾರತ ಪಾಕಿಸ್ತಾನ ಆಟದ ರೋಚಕತೆ ಇದೆಯಲ್ಲ ಬಹುಷಃ ಅದು inyaava ಪಂದ್ಯಕ್ಕೂ ಬಂದಿರಲಿಲ್ಲ. ಅದೇರೀತಿ ವೀಕ್ಷಕರು ಅವರಿಗೆ ಸ್ಪಂದಿಸಿದ್ದು ಕಠೊರವಾಗಿತ್ತು . ಒಂದೆಡೆ ಭಾರತದ ವಿಕ್ಷಕರಲ್ಲಿ ದಾಯಾದಿ ದ್ವೇಷ, ಗ್ಯಾಲರಿಯಲ್ಲಿ ಕುಳಿತಿದ್ದ ಬೇರೆ ವಿದೇಶಿಗರು ಭಾರತವನ್ನೇ ಬೆಮ್ಬಲಿಸುವಂತಿತ್ತು. ಇದ್ಯಾವುದು ತಪ್ಪೆಂದು ನನ್ನ ಭಾವನೆಯಲ್ಲ.
ಆದರೆ ಒಂದು ದೇಶ ಅಂತರಾಷ್ಟೀಯಮಟ್ಟದಲ್ಲಿ ಭಯೋತ್ಪಾದನೆಗೆ ಕುಖ್ಯಾತಿ ಪಡೆದು ತನ್ನದೇಶದಿಂದ ವಿಶ್ವಕಪ್ ಅತಿಥ್ಯವನ್ನು ಕಳೆದುಕೊಂಡಿದ್ದಲ್ಲದೆ ಬೇರೆ ಅದರಲ್ಲೂ ಹುಟ್ಟು ಪ್ರತಿಸ್ಪರ್ಧಿ ರಾಷ್ಟ್ರದಲ್ಲಿ ಆಡುವಾಗಲೂ ಕುಹುಕ ಎದುರಿಸಬೇಕಾಗಿದ್ದು ಕೇವಲ ಕೇವಲ ಅಲ್ಲಿ ತಾಂಡವವಾಡುತ್ತಿರುವ ಕೆಲವೇ ಕೆಲವು ಮತಿಯವಾದಿಗಳ ಅಧಿಕಪ್ರಸಂಗತನವೇ ಹೊರತು ಮತ್ತೇನಲ್ಲ!
ಈ ಬಗ್ಗೆ ಇನ್ನಾದರು ಬಹುಸಂಖ್ಯಾತರಾದ ಕಟ್ಟಾ ಶಾಂತಿವಾದಿಗಳಾದ muslimaru ಎಚ್ಚೆತ್ತುಕೊಂಡು ತಮ್ಮೊಳಗಿನ ರಕ್ಕಸರನ್ನು ಓಡಿಸಬೇಕಿದೆ. ಆಗ ಮಾತ್ರ ಪಾಕಿಸ್ತಾನದಂತ ದೇಶದ ಕಲಾವಿದರು, ಆಟಗಾರರು, ವ್ಯಾಪಾರಿಗಳು ಎಲ್ಲಕ್ಕಿಂತ ಹೆಚ್ಚಾಗಿ ಜನಸಾಮಾನ್ಯರು ನೆಮ್ಮದಿಯಿಂದ ಜೀವಿಸಬಹುದಾಗಿದೆ.