ಗುರುವಾರ, ಜನವರಿ 29, 2009

ಭೃಷ್ಟತೆ ಹುಟ್ಟುವುದು ಹೇಗೆ?

ನಾನು ಆಗಷ್ಟೇ ಶೂಟಿಂಗ್ ಮುಗ್ಸಿ ಆಸ್ಪತ್ರೆಯಿಂದ ಹೊರಗೆ ಬಂದೆ.... ಜೊತೆಗೆ ಆ ಆಸ್ಪತ್ರೆಯ ಪಿ.ಅರ್. ಓ.ಕೂಡ ಇದ್ರು.ಕ್ಯಾಮರ ಮ್ಯಾನ್ ಮತ್ತುಳಿದವರು ಗಾಡಿಯಲ್ಲಿ ಕುಳಿತಿದ್ರು. ಪಿ.ಅರ್. ಓ ಕೈಲಿ ನಾಲ್ಕು ಕವರುಗಳಿದ್ದವು. ಆಕೆ ನನ್ಕೈಲಿ ಅದನ್ನು ಕೊಡಲು ಬಂದರು. ನಾನು ಅದೇನೆಂದು ಕೇಳಿದೆ. ತೊಗೊಳ್ಳಿ ಗೊತ್ತಾಗತ್ತೆ ಅಂದ್ರು. ಆದರು ನಾನು ಒತ್ತಾಯ ಪೂರ್ವಕವಾಗಿ ಕೇಳಿದಾಗ ಅದ್ರಲ್ಲಿ ಗಿಫ್ಟ್ ವೋಚರ್ ಇದೆ. ತಗಳ್ಳಿ ಅಂದ್ರು. ಬೇಡವೆಂದರು ಕೈಗೆ ತುರುಕಿದರು. ನಾನು ಹೇಳಿದೆ , ಇದೆಲ್ಲ ನಂಗೆ ಅಭ್ಯಾಸವಿಲ್ಲ ಎಂದು. ಅಭ್ಯಾಸವಾಗುತ್ತೆ ತಗಳ್ಳಿ ಅವ್ರು ಒತ್ತಾಯ ಮಾಡತೊಡಗಿದರು.... ನಾನು ಗಾಬರಿಯಾಗಿ ಹೇಳಿದೆ, ನಾವು ಮಾಧ್ಯಮದವರು ಜನರಿಗೆ ಮಾಡಬಾರದು ಎನ್ನುತ್ತೇವೆ, ಅಂತಹುದರಲ್ಲಿ ನಾವೇ ಈ ತರ ತಗೊಳ್ಳೋದು ಸರಿ ಅಲ್ಲ. ಬೇಡವೇ ಬೇಡ ಎಂದು ಮತ್ತೆ ನಾನವರ ಕೈಗೆ ತುರುಕಿದೆ. ಹಾಗಾದರೆ ನಿಮ್ಮ ತೀಮಿಗೂ ಬೇಡ್ವ ಅಂದ್ರು... ನಾನು ಬೇಡ ಅಂದೇ... ಹಾಗೆ ಒಂದು ಥ್ಯಾಂಕ್ಸ್ ಹೇಳಿ ಬಂದು ಗಾಡಿ ಹತ್ತಿದೆ. ಉಳಿದವರಿಗೆ ವಿಷ್ಯ ಹೇಳಿದೆ... ನಮ್ಮ ಕ್ಯಾಮರಾಮ್ಯಾನ್ ಬಯ್ಯತೊಡಗಿದ...ಮೇಡಂ, ನಿಮಗೆ ಬೇಡವೆಂದರೆ ನಮಗಾದ್ರೂ ತಂದು ಕೊಡೋದು... ಫಿಲ್ದಲ್ಲಿ ಎಲ್ಲ ತಗೋತಾರೆ... ಅವ್ರ ನಂಬರ್ ಕೊಡಿ , ಇಸ್ಕೊಂಡು ಬರ್ತೀನಿ ಅಂದ... ಹಾಗೆ ಫೋನ್ ನಂಬರ್ ತಗೊಂಡು ಪಿ.ಅರ್. ಓ ಬೆನ್ನ ಹಿಂದೆ ಓಡಿದ... ಆದ್ರೆ ಅವ್ರು ಸಿಗಲಿಲ್ಲ...ನಂಗೆ ನಾನು ಮಾಡಿದ್ದು ತಪ್ಪೇನೋ ಅನ್ನಿಸತೊಡಗಿತು... ನನ್ನ ವೃತ್ತಿ ಗುರುಗಳ ಹತ್ರ ವಿಷ್ಯ ಹೇಳಿ , ನಾನು ಮಾಡಿದ್ದೂ ತಪ್ಪ ಎಂದು ಕೇಳಿದೆ.. ತಪ್ಪಲ್ಲ ಅಂದ್ರು.. ಅಲ್ಲಿಗೆ ವಿಷ್ಯ ನಿಂತಿತು... ಇದೆಲ್ಲ ಆಗಿ ಸುಮಾರು ೬ ತಿಂಗಳಾಯ್ತು...

ಆ ನಂತರ ಅದೇ ಆಸ್ಪತ್ರೆ ಯಿಂದ ಗಿಫ್ಟುಗಳು ಬಂದವು..

ಕೊನೆಗೆ ಮೊನ್ನೆ ಗೊತ್ತಾಯ್ತು...ನಮ್ಮ ಕಂಪೆನಿಗೆ ಕೊಡಬೇಕಾದ ಹಣ ಇನ್ನು ಬಂದಿಲ್ಲ ಅಂತ...

ಈಗಲೂ ನಂಗೆ ಕಾಡುತ್ತಿರುವ ಪ್ರಶ್ನೆಗಳು...೧. ಪ್ರಚಾರಕ್ಕೆ ದೊಡ್ಡ ಮೊತ್ತದ ಹಣ ಕೊಡುವ ಬದಲು , ಕೆಲಸಗಾರರನ್ನೇ ಕೊಂಡರೆ ಹೇಗೆ ಎಂದು ವ್ಯವಸ್ಥೆ ಯೋಚಿಸುತ್ತಾ? ೨. ಬರುತ್ತಿರುವ ಸಂಬಳ ಸಾಲದೇ ಹೋದಾಗ ವ್ಯಕ್ತಿ ಆಸೆಗೆ ಬಿಳುತ್ತಾನ?
೩. ಇಂದು ಪ್ರತಿವ್ಯವಸ್ಥೆಯಲ್ಲೂ ನೈತಿಕತೆಗಿಂತ ಹಣವೇ ಹೆಚ್ಚು ಪ್ರಾಧಾನ್ಯತೆ ಗಳಿಸುತ್ತ ?

ಗೊತ್ತಿಲ್ಲ.....

ಶುಕ್ರವಾರ, ನವೆಂಬರ್ 7, 2008

ನಾಯಿಬಾಲ ಡೊಂಕೆ...ಕಾಗೆ ಬಣ್ಣ kariyee.....

ಕಳೆದ ಕೆಲವು ದಿನಗಳ ಹಿಂದೆ ಕರ್ಪೋರಶನ್ ಸ್ಟಾಪಲ್ಲಿ ನಿಂತಿದ್ದೆ. ಬಸ್ ಬಂತು ಹತ್ತಿದೆ. ಬಸ್ ಸ್ವಲ್ಪ ಮುಂದ್ ಹೋಗುವಷ್ಟರಲ್ಲಿ ಒಬ್ಬ ಹುಡುಗಿ ಸರ್ ವಿಧಾನ ಸೌಧಕ್ಕೆ ಹೋಗ್ಬೇಕು ಎಲ್ಲಿ ಇಲಿಲಿ ಅಂತ ಕೇಳಿದ್ಲು. ಬಸ್ ಡ್ರೈವರ್ ಗಹಗಹಿಸಿ ನಗತೊಡಗಿದ....ಅಷ್ಟರಲ್ಲಿ ಕಂಡಕ್ಟರ್ ಬಂದು ಡ್ರೈವರ್ಗೆ ಹೇಳ್ದ, ಯಾಕೆ ಹುಡುಗಿಯರನ್ನ ಆಟಾ ಅಡಿಸ್ತಿಯ, ಆಕೆ ಇಗಿಲ್ಲಿಂದ ನಡೆದುಕೊಂಡು ಹೋಗ್ಬೇಕು. ಹಗೆ ಹೇಳ್ತಾ ಹೇಳ್ತಾ ಬಸ್ ನಿಲ್ಲಿಸಿ ಆಕೆಗೆ ರೂಟ್ ಹೇಳಿಕೊಟ್ಟ. ಹಾಗೆಯೇ ಕೆಲವು ದಿನಗಳ ಹಿಂದಷ್ಟೇ ನನಗೊಂದು ಅನುಭವ ಆಗಿತ್ತು. ಬಸ್ ಸ್ಟಾಪ ಲ್ಲಿ ಫೋನಲ್ಲ್ಲಿ ಮಾತಾಡುತ್ತಿದ್ದೆ. ಬಸ್ ಬಂತು . ಅದನ್ನು ನಿಲ್ಲಿಸದೆ ಹಾಗೆಯೇ ಡ್ರೈವರ್ ಓಡಿಸತೊಡಗಿದ... ನಾನು ಅದ್ರು ಕಷ್ಟಪಟ್ಟು ಹತ್ತಿದೆ. ಜೋರಾಗಿ ಬಯ್ಯತೊಡಗಿದ. ಮೊಬೈಲಿನಲ್ಲಿ ಮಾತಾಡ್ತಿರ, ಬೇಗ ಹತ್ತಿಕೊಲ್ಲಿ ಅಂತ. ನನಗೆ ಸಿಟ್ಟು ಬಂತು. ಮೊಬೈಲಲ್ಲಿ ಮಾತಾಡೋದು ನನ್ನ ಬಿಸಿನೆಸ್. ಬಸ್ ಸ್ಟಾಪಲ್ಲಿ ಬಸ್ ನಿಲ್ಲಿಸೋದು ನಿಮ್ಮ ಬಿಸಿನೆಸ್. ನೀವು ನಿಮ್ಮ ಕೆಲಸ ಸರಿಯಾಗಿ ಮಾಡಿಕೊಂಡು ಇನ್ನೊಬ್ರ ವಿಷಯದಲ್ಲಿ ಮಾತಾಡಿ, ಎಂದೆ.

Ii eradU Gatanegalu ನಮ್ಮ ಸುತ್ತಲಿನ ಜಗತ್ತಿನಲ್ಲಿ ಅಸಹನೆಯನ್ನು ಹೊರಹಾಕುವ ಮಾರ್ಗಗಳು. ನಮ್ಮ ಕಚೆರಿಗಳಲ್ಲು ಅಷ್ಟೆ. ಅವರ ವ್ಯಕ್ತಿತ್ವಕ್ಕೆ, ಅಹಮಿಗೆ ಪೆಟ್ಟು ಬಿದ್ದಾಗ ನೇರವಾಗಿ ಮಾತಾಡುವ ಆರೋಗ್ಯಕರ ಮನಸ್ತಿತಿ ಯಾರಿಗೂ ಇಲ್ಲ. ಮೊಸರಲ್ಲಿ ಕಲ್ಲು ಹುಡುಕುವ ಸ್ವಭಾವ ಕೆಲವರದ್ದದರೆ ಇನ್ನು ಕೆಲವರು ಸಾರ್ವಜನಿಕವಾಗಿ ಬೈದು ತಮ್ಮ ಅಧಿಕಾರ ಸ್ಥಾಪಿಸುವ ಯತ್ನ ಮಾಡುತ್ತಾರೆ. ನಮಗೆ ಆಗದಿದ್ದರೆ ಅವರ ಬಗ್ಗೆ , ಅವರು ಮಾಡುತ್ತಿರುವ ಸಣ್ಣ ತಪ್ಪನ್ನು ದೊಡ್ಡದಾಗಿ ಮಾಡುತ್ತೇವೆ. ಆ ಮೂಲಕ ಅಹಂ ಇಲ್ಲದವರ ಅಹಂ ಅನ್ನು ಕೆನಕುತ್ತೇವೆ. ಒಬ್ಬರ ಅಧಿಕಾರವನ್ನು ಒಪ್ಪಿಕೊಲ್ಲಳಗದಾಗ ಗುಂಪುಗಾರಿಕೆ ಮಾಡುತ್ತೇವೆ, ಕೆಲಸವನ್ನು ಧಿಕ್ಕರಿಸಿ ವಹಿಸಿದ ಕೆಲಸಕ್ಕೆ ನೆಪ ಹೇಳುತ್ತೇವೆ. ಆದರೆ ಹಾಗೆ ಮಾಡುವವರಿಗೆ ಗೊತ್ತಿರುವುದಿಲ್ಲ. ಅವರು ತಾವೇ ತಾವಾಗಿ ತಮ್ಮಋಣಾತ್ಮಕ ಮನೋಭಾವವನ್ನು ಜಗಜ್ಜಹಿರು ಮಾಡುತ್ತಿದ್ದೇವೆ ಎಂದು.

ಕೊನೆಗೊಂದು ದಿನ ಇವರ ಗುರಿ ತಪ್ಪಿಹೋಗುತ್ತದೆ. ಕೇವಲ ಇವರ ಕಾಲಡಿಯ ನೆಲಮಾತ್ರ ಉಳಿದುಕೊಳ್ಳುತ್ತದೆ. ದುರಂತವೆಂದರೆಈ ಋಣಾತ್ಮಕ ಮನೋಭಾವದ ಜನರಿಗೆ ಆತ್ಮಾವಲೋಕನ ಎಂಬುದು ಇರುವುದಿಲ್ಲ. ತಾವು ಮಾಡಿದ್ದೆ ಸರಿಯಾಗಿರುತ್ತದೆ. ಅದಕ್ಕಾಗಿ ಇನ್ನಷ್ಟು ರುನತ್ಮಕವಾಗಿ ವರ್ತಿಸುತ್ತಾರೆ. ಬಸ್ಸು ನಿಲ್ಲಿಸದೆಜನರ ಪ್ರಾಣ ತೆಗೆದು ಸಸ್ಪೆನ್ದಾಗುತ್ತಾರೆ. ಹುಡುಗಿ ದಾರಿ ತಪ್ಪಿ ಅಳತೊದಗಿದಾಗ ಸಂತೋಷಪಡುವ ಡ್ರೈವರ್ ಮಗಳಿಗೆ ಇನ್ಯಾರೋ ದಾರಿ ತಪ್ಪಿಸುತ್ತಾರೆ. ಆಗಲು ಕೂಡ ಈ ಋಣಾತ್ಮಕ ಮಂದಿ ತಮ್ಮ ತಪ್ಪನ್ನು ಮರೆಯುತ್ತಾರೆ. ಬೇರೆಯವರ ಕಡೆಯೇ ಬೆರಳು ತೋರಿಸುತ್ತಾರೆ....

ಶುಕ್ರವಾರ, ಆಗಸ್ಟ್ 8, 2008

ನಾನೆಂದರೆ ನಾನಲ್ಲ.....


ಹೆಸರು : ಶೀಲಾ ಭಟ್....
ಸುಮ್ಮನೆ ನನಗನಿಸಿದ್ದನ್ನು ಇದರಲ್ಲಿ ಬರೆಯುತ್ತೇನೆ...
ಯಾಕೆ ಬರೆಯುತ್ತೇನೆ...ಗೊತ್ತಿಲ್ಲ.....
ಆದರೆ ಪ್ರತಿಬರವಣಿಗೆಯೂ ನನ್ನನ್ನು ನಾನು ಕಂಡುಕೊಳ್ಳಲು ಸಹಾಯ ಮಾಡುತ್ತದೆ ಎಂದು ನಂಬಿದ್ದೇನೆ. ನನ್ನನ್ನು ಎಚ್ಚರವಾಗೇ ಇಡುವ ನಿಷೀಥ... ಇದೀಗ ನಿಮ್ಮ ಮುಂದೆ....
ಕತ್ತಲೆಯಿಂದ ಬೆಳಕಿನೆಡೆಗೆ....