ನಾನು ಆಗಷ್ಟೇ ಶೂಟಿಂಗ್ ಮುಗ್ಸಿ ಆಸ್ಪತ್ರೆಯಿಂದ ಹೊರಗೆ ಬಂದೆ.... ಜೊತೆಗೆ ಆ ಆಸ್ಪತ್ರೆಯ ಪಿ.ಅರ್. ಓ.ಕೂಡ ಇದ್ರು.ಕ್ಯಾಮರ ಮ್ಯಾನ್ ಮತ್ತುಳಿದವರು ಗಾಡಿಯಲ್ಲಿ ಕುಳಿತಿದ್ರು. ಪಿ.ಅರ್. ಓ ಕೈಲಿ ನಾಲ್ಕು ಕವರುಗಳಿದ್ದವು. ಆಕೆ ನನ್ಕೈಲಿ ಅದನ್ನು ಕೊಡಲು ಬಂದರು. ನಾನು ಅದೇನೆಂದು ಕೇಳಿದೆ. ತೊಗೊಳ್ಳಿ ಗೊತ್ತಾಗತ್ತೆ ಅಂದ್ರು. ಆದರು ನಾನು ಒತ್ತಾಯ ಪೂರ್ವಕವಾಗಿ ಕೇಳಿದಾಗ ಅದ್ರಲ್ಲಿ ಗಿಫ್ಟ್ ವೋಚರ್ ಇದೆ. ತಗಳ್ಳಿ ಅಂದ್ರು. ಬೇಡವೆಂದರು ಕೈಗೆ ತುರುಕಿದರು. ನಾನು ಹೇಳಿದೆ , ಇದೆಲ್ಲ ನಂಗೆ ಅಭ್ಯಾಸವಿಲ್ಲ ಎಂದು. ಅಭ್ಯಾಸವಾಗುತ್ತೆ ತಗಳ್ಳಿ ಅವ್ರು ಒತ್ತಾಯ ಮಾಡತೊಡಗಿದರು.... ನಾನು ಗಾಬರಿಯಾಗಿ ಹೇಳಿದೆ, ನಾವು ಮಾಧ್ಯಮದವರು ಜನರಿಗೆ ಮಾಡಬಾರದು ಎನ್ನುತ್ತೇವೆ, ಅಂತಹುದರಲ್ಲಿ ನಾವೇ ಈ ತರ ತಗೊಳ್ಳೋದು ಸರಿ ಅಲ್ಲ. ಬೇಡವೇ ಬೇಡ ಎಂದು ಮತ್ತೆ ನಾನವರ ಕೈಗೆ ತುರುಕಿದೆ. ಹಾಗಾದರೆ ನಿಮ್ಮ ತೀಮಿಗೂ ಬೇಡ್ವ ಅಂದ್ರು... ನಾನು ಬೇಡ ಅಂದೇ... ಹಾಗೆ ಒಂದು ಥ್ಯಾಂಕ್ಸ್ ಹೇಳಿ ಬಂದು ಗಾಡಿ ಹತ್ತಿದೆ. ಉಳಿದವರಿಗೆ ವಿಷ್ಯ ಹೇಳಿದೆ... ನಮ್ಮ ಕ್ಯಾಮರಾಮ್ಯಾನ್ ಬಯ್ಯತೊಡಗಿದ...ಮೇಡಂ, ನಿಮಗೆ ಬೇಡವೆಂದರೆ ನಮಗಾದ್ರೂ ತಂದು ಕೊಡೋದು... ಫಿಲ್ದಲ್ಲಿ ಎಲ್ಲ ತಗೋತಾರೆ... ಅವ್ರ ನಂಬರ್ ಕೊಡಿ , ಇಸ್ಕೊಂಡು ಬರ್ತೀನಿ ಅಂದ... ಹಾಗೆ ಫೋನ್ ನಂಬರ್ ತಗೊಂಡು ಪಿ.ಅರ್. ಓ ಬೆನ್ನ ಹಿಂದೆ ಓಡಿದ... ಆದ್ರೆ ಅವ್ರು ಸಿಗಲಿಲ್ಲ...ನಂಗೆ ನಾನು ಮಾಡಿದ್ದು ತಪ್ಪೇನೋ ಅನ್ನಿಸತೊಡಗಿತು... ನನ್ನ ವೃತ್ತಿ ಗುರುಗಳ ಹತ್ರ ವಿಷ್ಯ ಹೇಳಿ , ನಾನು ಮಾಡಿದ್ದೂ ತಪ್ಪ ಎಂದು ಕೇಳಿದೆ.. ತಪ್ಪಲ್ಲ ಅಂದ್ರು.. ಅಲ್ಲಿಗೆ ವಿಷ್ಯ ನಿಂತಿತು... ಇದೆಲ್ಲ ಆಗಿ ಸುಮಾರು ೬ ತಿಂಗಳಾಯ್ತು...
ಆ ನಂತರ ಅದೇ ಆಸ್ಪತ್ರೆ ಯಿಂದ ಗಿಫ್ಟುಗಳು ಬಂದವು..
ಕೊನೆಗೆ ಮೊನ್ನೆ ಗೊತ್ತಾಯ್ತು...ನಮ್ಮ ಕಂಪೆನಿಗೆ ಕೊಡಬೇಕಾದ ಹಣ ಇನ್ನು ಬಂದಿಲ್ಲ ಅಂತ...
ಈಗಲೂ ನಂಗೆ ಕಾಡುತ್ತಿರುವ ಪ್ರಶ್ನೆಗಳು...೧. ಪ್ರಚಾರಕ್ಕೆ ದೊಡ್ಡ ಮೊತ್ತದ ಹಣ ಕೊಡುವ ಬದಲು , ಕೆಲಸಗಾರರನ್ನೇ ಕೊಂಡರೆ ಹೇಗೆ ಎಂದು ವ್ಯವಸ್ಥೆ ಯೋಚಿಸುತ್ತಾ? ೨. ಬರುತ್ತಿರುವ ಸಂಬಳ ಸಾಲದೇ ಹೋದಾಗ ವ್ಯಕ್ತಿ ಆಸೆಗೆ ಬಿಳುತ್ತಾನ?
೩. ಇಂದು ಪ್ರತಿವ್ಯವಸ್ಥೆಯಲ್ಲೂ ನೈತಿಕತೆಗಿಂತ ಹಣವೇ ಹೆಚ್ಚು ಪ್ರಾಧಾನ್ಯತೆ ಗಳಿಸುತ್ತ ?
ಗೊತ್ತಿಲ್ಲ.....
ಗುರುವಾರ, ಜನವರಿ 29, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)